ಶ್ರೀಮತಿ ಪಿ ಬಿ ಲದ್ದಿಮಠ ,ಸ ಹಿ ಪ್ರಾ ಶಾಲೆ ಬೈಲೂರು


*ವೀರ ನಾರಿ*

ಅಮ್ಮಾ ನನ್ನಮ್ಮ ಚನ್ನಮ್ಮ
ಬೆಳ್ಳಿ ಚುಕ್ಕಿಯೆಂದೇ ನಿನಗೆ ಹೆಸರಮ್ಮ.
ಕಿತ್ತೂರಿನ ಹೆಂಗಳೆಯರಿಗೆ
ಸ್ಪೂರ್ತಿ ನೀನಾದೆಯಮ್ಮ.
ಧೈರ್ಯ ಶೌರ್ಯ ತ್ಯಾಗಕ್ಕೆ ಹೆಸರಾದೆಯಮ್ಮ
ಭಕ್ತಿ ಶಕ್ತಿ ಭಾವಕ್ಕೆ ನೆರಳು ನೀನಮ್ಮ
ಕಪ್ಪ ಕೊಡುವುದಲ್ಲವೆಂದು
ಗಟ್ಟಿಯಾಗಿ ಹೇಳಿದೆಯಮ್ಮ.
ಇತಿಹಾಸದ ಪುಟಗಳಲಿ
ಮೊದಲ ಹೆಸರು ನಿನದಮ್ಮ
ವೈರಿ ರುಂಡ ಚಂಡಾಡಿದ
ರಣಚಂಡಿ ನೀನಮ್ಮ.
ಹೆಣ್ಣಾಗಿ ಕಲಿಯಾಗಿ ರಾಣಿಯಾಗಿ
ಭಾರತದ ವೀರಪುತ್ರಿಯಾಗಿ
ಕನ್ನಡಿಗರ ಮನೆ ಮಗಳಾಗಿ
ದಂತ ಕಥೆಯಾದೆ ನೀನಮ್ಮ.
ಊರು ನಗರ ದೇಶದ
ನಡುವೆ ಖಡ್ಗ ಹಿಡಿದು
ಸ್ಪೂರ್ತಿ ಮೂರ್ತಿ ನೀನಮ್ಮ
ಕಿತ್ತೂರಿನ ಸ್ವಾತಂತ್ರ್ಯಕ್ಕೆ ಪ್ರಾಣ ತೆತ್ತೆಯಮ್ಮ.
ನಿನ್ನ ತ್ಯಾಗ ಬಲಿದಾನ ವನು
ಬಣ್ಣಿಸಲು ಅಸಾಧ್ಯವದು
ದೇಶ ಭಾಷೆ ಎಲ್ಲೆ ಮೀರಿ
ನೀನು ಸದಾ ಅಮರ.
----------------------------------------------------------------------------------------------------------------------------------------------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ