ದೈಹಿಕ /ಆರೋಗ್ಯ ಶಿಕ್ಷಣ
ಇತರೆ ಮಾಹಿತಿ
ದೈಹಿಕ ಶಿಕ್ಷಣ
ರೋಗಗಳು/ತೊಂದರೆಗಳು &ಪರಿಹಾರ | ಆಹಾರ ಪದಾರ್ಥಗಳು/ಹಣ್ಣುಗಳು &ಉಪಯೋಗ | ಆರೋಗ್ಯಕರ ಹವ್ಯಾಸಗಳು |
(01) ಹೃದಯ ಸಮಸ್ಯೆಯ ಲಕ್ಷಣಗಳು | (01) ಹಾಗಲಕಾಯಿ ಉಪಯೋಗ-೧ | (01) ತಣ್ಣೀರು ಸ್ನಾನ |
(02)ಕ್ಷಯರೋಗಕ್ಕೆ ಮದ್ದು | ((02) ಬಾಳೇಹಣ್ಣು ಉಪಯೋಗ-೧ | (02) ನಡಿಗೆ |
(03) ಮೊಡವೆ | (03) ಎಳೆನೀರು | (03) ಸೂರ್ಯ ನಮಸ್ಕಾರ |
(04) ಕೂದಲು | (04) ಲವಂಗ | (04) Toothpaste ನ ರಾಸಾಯನಿಕದ ಪರೀಕ್ಷೆ |
(05) ಕಣ್ಣಿನ ವಿಶೇಷ | (05) ಎಳ್ಳು | (05) ವ್ಯಾಯಾಮ |
(06) ಮುಖದ ಸೌಂದರ್ಯ | (06) ಶೇಂಗಾ | (06) Bike riding |
(07) ಉರಿಮೂತ್ರ | (07) ಒಣದ್ರಾಕ್ಷಿ | (07) ಏಕಾಗ್ರತೆ |
(08)ಒಣಕೆಮ್ಮು | (08) ಸಾಸುವೆ | |
(09) ಚರ್ಮದ ಆರೈಕೆ | (09)ದಾಳಿಂಬೆ | |
(10) ಪಿತ್ತ | (10)ನವಿಲು ಕೋಸು | |
(11) | (11) ವೀಳ್ಯದ ಎಲೆ | |
(12) | (12) ಟೊಮ್ಯಾಟೊ | |
(13) | (13) ಸಾಸುವೆ ಎಣ್ಣೆ | |
(14) | (14) ಸೌತೆಕಾಯಿ | |
(15) | (15) ಜೇನು | |
(16) | (16) ಬೀಟ್ರೂಟ್ | |
(17) | (17) ಬದನೆಕಾಯಿ | |
(18) | (18) ತುಳಸಿ ಚಹಾ | |
(19) | (19) ಪುದಿನಾ | |
(20) | (20) ಏಲಕ್ಕಿ | |
(21) | (21) ಪಾಲಕ್ | |
(22) | (22) ಉಪ್ಪು | |
(23) | ||
(24) | ||
(25) |
ಊಟ ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು?*
ಭಾರತದಲ್ಲಿ ನಾವು ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ನೆಲದ ಮೇಲೆ ಕೂತು ಊಟ ಮಾಡುವ ಜನರನ್ನು ಕಾಣುತ್ತೇವೆ. ನಮ್ಮಲ್ಲಿ ಕೆಲವು ಜನ ಊಟ ಮಾಡಲೆಂದೆ ಡೈನಿಂಗ್ ಟೇಬಲ್,ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ನಿಮಗೆ ಆರಾಮದಾಯಕವಾಗಿರಬಹುದು.
ಆದರೆ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಉಪಯೋಗವಾಗುವುದಿಲ್ಲ. ಇದಕ್ಕಾಗಿ ನಮ್ಮ ಪೂರ್ವಿಕರು ಒಂದು ಶಿಸ್ತನ್ನೆ ಅಳವಡಿಸಿದ್ದರು. ಅವರೆಲ್ಲರು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಆಹಾರವನ್ನು ಸೇವಿಸುತ್ತಿದ್ದರು. ಹೀಗೆ ಆಹಾರ ಸೇವಿಸಲು ಇರುವ 10 ಕಾರಣಗಳನ್ನು ನಾವಿಲ್ಲಿ ನೀಡಿದ್ದೇವೆ, ಇದನ್ನು ಅಳವಡಿಸಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ.
ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ:
ನೀವು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಊಟ ಮಾಡುವುದರಿಂದ ನಿಮಗೆ ತಿಳಿಯದಂತೆ ಒಂದು ಉಪಯೋಗ ದೊರೆಯುತ್ತದೆ. ಅದೇನೆಂದರೆ ಚಕ್ಕಳ ಮಕ್ಕಳವು ಒಂದು ಸುಖಾಸನ ಅಥವಾ ಅರ್ಧ ಪದ್ಮಾಸನ ಎಂದೇ ಹೆಸರುವಾಸಿಯಾಗಿದೆ. ಈ ಸುಖಾಸನವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ (ಇನ್ನೂ ಕೆಲವರ ಅಭಿಪ್ರಾಯದಂತೆ ನೀವು ಸುಖಾಸನದಲ್ಲಿ ಕುಳಿತ ಕೂಡಲೆ ನಿಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆಯಂತೆ). ಇದರ ಜೊತೆಗೆ ನೀವು ತಟ್ಟೆಯಲ್ಲಿ ಕುಳಿತು ಊಟ ಮಾಡುವಾಗ ಆಹಾರವನ್ನು ಸೇವಿಸಲು ಸ್ವಲ್ಪ ಮುಂದೆ ಬಾಗುತ್ತೀರಿ ಮತ್ತು ಅದನ್ನು ಅಗಿಯಲು ಹಿಂದಕ್ಕೆ ಬಾಗುತ್ತೀರಿ. ಹೀಗೆ ನಿಯಮಿತವಾಗಿ ಹಿಂದೆ- ಮುಂದೆ ಬಾಗುವುದರಿಂದ ನಿಮ್ಮ ಕಿಬ್ಬೊಟ್ಟೆಯ ಭಾಗದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚಾಗಿ ಸ್ರವಿಸಿ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.
ತೂಕವನ್ನು ಇಳಿಸಿಕೊಳ್ಳಲು ಸಹಕಾರಿ:
ನೀವು ಸುಖಾಸನದಲ್ಲಿ ಕುಳಿತಾಗ ಮೆದುಳು ತನ್ನಷ್ಟಕ್ಕೆ ತಾನೆ ಶಾಂತಗೊಳ್ಳುತ್ತದೆ ಮತ್ತು ಆಹಾರವನ್ನು ಸೇವಿಸಲು ಅಗತ್ಯವಾಗಿರುವ ಮನಸ್ಥಿತಿಗೆ ಬಂದು ಅದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ಆಸನವು ಒಮ್ಮನಿಸಿನಿಂದ ಆಹಾರವನ್ನು ಸೇವಿಸುವಂತೆ ಮಾಡಿ, ನಿಮಗೆ ಬೇಗ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇನ್ನೂ ಕುತೂಹಲದಾಯಕ ವಿಚಾರವೆಂದರೆ ಈ ಆಸನದಲ್ಲಿ ನೀವು ಕುಳಿತು ಊಟ ಮಾಡುವಾಗ, ಟೇಬಲ್ ಮೇಲೆ ಕುಳಿತು ಊಟ ಮಾಡುವುದಕ್ಕಿಂತ ಕಡಿಮೆ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೀವು ಕಡಿಮೆ ಆಹಾರವನ್ನು ಸೇವಿಸಲು ಮತ್ತು ಆಹಾರ ಸೇವನೆಯ ಕುರಿತಾಗಿ ಆಸಕ್ತಿ ತಾಳುವುದು ಕಡಿಮೆಯಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದು ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿ ಒಳ್ಳೆಯದು.
ನಿಮ್ಮ ದೇಹಕ್ಕೆ ಮತ್ತಷ್ಟು ನಮ್ಯತೆಯನ್ನು ಒದಗಿಸುತ್ತದೆ:
ನೀವು ಚಕ್ಕಳ ಮಕ್ಕಳ ಅಥವಾ ಪದ್ಮಾಸನದಲ್ಲಿ ಕುಳಿತಾಗ ಕಿಬ್ಬೊಟ್ಟೆಯ ಮೇಲಿನ ಮತ್ತು ಕೆಳ ಭಾಗದಲ್ಲಿ, ಸೊಂಟ, ಹೊಟ್ಟೆಯ ಸುತ್ತ ಇರುವ ಪೆಲ್ವಿಸ್ ಭಾಗದಲ್ಲಿರುವ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಇದರಿಂದ ನಿಮಗೆ ಮುಂದೆ ಬರುವ ನೋವು ಸಹ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯೂಹವು ವಿಶ್ರಾಂತಿಯನ್ನು ಪಡೆದು ತನ್ನ ಸುಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಆಸನವು ನಿಮ್ಮ ಹೊಟ್ಟೆಯನ್ನು ಯಾವುದೇ ಕಾರಣಕ್ಕು ಕುಗ್ಗಿಸುವುದಿಲ್ಲ. ಮೇಲಾಗಿ ಇದು ನೀವು ತಿಂದ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ.
ಊಟ ಮಾಡುವಾಗ ಸ್ಥಿರ ಪ್ರಙ್ಞೆಯನ್ನು ಒದಗಿಸುತ್ತದೆ:
ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಮನಸ್ಸು ತನ್ನ ಪ್ರಶಾಂತತೆಯನ್ನು ಕಾಪಾಡಿಕೊಂಡಿರುತ್ತದೆ. ಇದರಿಂದ ನಿಮಗೆ ಆಹಾರದಲ್ಲಿ ಏನನ್ನು ತಿನ್ನಬೇಕು ಎಂಬ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆಗ ನೀವು ಸಹಜವಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಲು ಆಧ್ಯತೆ ನೀಡುತ್ತೀರಿ. ಅಲ್ಲದೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಕುರಿತಾಗಿ ಸಹ ನೀವು ಆಲೋಚಿಸಿ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ನೀವು ಸ್ಥಿತ ಪ್ರಙ್ಞೆಯನ್ನು ಕಾಯ್ದುಕೊಳ್ಳುತ್ತೀರಿ.
ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಲು ನೆರವಾಗುತ್ತದೆ:
ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ಮತ್ತೊಂದು ಉಪಯೋಗ ನಿಮಗೆ ದೊರೆಯುತ್ತದೆ. ಅದೇನೆಂದರೆ ನಿಮ್ಮ ಕುಟುಂಬದ ಜೊತೆಗೆ ಕುಳಿತು ಊಟ ಮಾಡುವ ಸುಯೋಗ. ಹೌದು ಎಂತಹ ಬೆಲೆ ಬಾಳುವ ಊಟದ ಮೇಜನ್ನು ನಿಮ್ಮ ಮನೆಯಲ್ಲಿ ಹೊಂದಿದ್ದರು, ಅದರಲ್ಲಿ ಹತ್ತು ಜನ ಕುಳಿತು ಊಟ ಮಾಡಲು ಸ್ವಲ್ಪ ಇರಿಸು ಮುರಿಸು ಉಂಟಾಗುತ್ತದೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ಈ ಸಮಸ್ಯೆಯು ನಿಮ್ಮನ್ನು ಕಾಡುವುದಿಲ್ಲ. ಜೊತೆಗೆ ನಿಮ್ಮ ಕುಟುಂಬ ಸದಸ್ಯರ ಸಮಸ್ಯೆಗಳನ್ನು ಮತ್ತು ಯೋಗ ಕ್ಷೇಮಗಳನ್ನು ವಿಚಾರಿಸಿಕೊಳ್ಳುವ ವೇದಿಕೆಯಾಗಿ ನಿಮ್ಮ ಊಟದ ಸಮಯ ಸದ್ವಿನಿಯೋಗವಾಗುತ್ತದೆ. ಹೀಗೆ ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹ ಈ ಪದ್ಧತಿ ನಿಮ್ಮ ನೆರವಿಗೆ ಬರುತ್ತದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)